ಮುಜಾಫರ್ ನಗರದ ಗಲಭೆಗಳ ನಿರ್ವಸಿತರಿಗೆ ಪರಿಹಾರ, ಪುರ್ನವಸತಿ ಮತ್ತು ನ್ಯಾಯವನ್ನು ದೊರಕಿಸಿ !

ಮುಜಾಫರ್ ನಗರದ ಕೋಮು ಗಲಭೆಯ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಹೋರಾಡುವ ಮೂಲಕ ಹೊಸ ವರ್ಷವನ್ನು ಆರಂಭಿಸಲು ಸಿಪಿಐಎಂಎಲ್ ನೀಡಿದ ಅಖಿಲ ಭಾರತ ಪ್ರತಿಭಟನೆಯ ಕರೆಯ ಮೇರೆಗೆ ಜನವರಿ 2, 2014 ರಂದು ಬೆಂಗಳೂರು, ಮೈಸೂರು, ದಾವಣಗೆರೆ ಮತ್ತು ಗಂಗಾವತಿಯಲ್ಲಿ ಬೃಹತ್ ಪ್ರತಿಭಟನೆಗಳನ್ನು ನಡೆಸಿ ಈ ಬೇಡಿಕೆಗಳನ್ನು ಒತ್ತಾಯಿಸಲಾಯಿತು : 1. ಎಫ ಆಯ್ ಆರ್ ನಲ್ಲಿ ಹೆಸರಿಸಿರುವ ಎಲ್ಲಾ ಗಲಭೆಕೋರರನ್ನು ಮತ್ತು ಅತ್ಯಾಚಾರ ಆರೋಪಿಗಳನ್ನು ತಕ್ಷಣ ಬಂಧಿಸಿ 2. ಎಲ್ಲ ಗಲಭೆ ಸಂತ್ರಸ್ತರಿಗೆ ಉತ್ತರ ಪ್ರದೇಶ ಸÀರ್ಕಾರವು ತಕ್ಷಣ ಪರಿಹಾರ ಮತ್ತು ಪುನರ್ವಸತಿಯನ್ನು ಒದಗಿಸಬೇಕು.

ಮುಜಾಫರ್ ನಗರದ ಪರಿಹಾರ ಶಿಬಿರದಲ್ಲಿರುವವರು ತಮ್ಮ ಪ್ರೀತಿಪಾತ್ರರನ್ನು ನಿರ್ದಯವಾಗಿ ಕೊಲ್ಲುವುದನ್ನು, ಅತ್ಯಾಚಾರಕ್ಕೆ ಈಡಾಗುವುದನ್ನು, ತಮ್ಮ ಮನೆ ಮಠ ಮತ್ತು ಬದುಕುವ ಮಾರ್ಗಗಳು ನಾಶವಾಗುವುದನ್ನು ನೋಡಿದ್ದಾರೆ. ಉತ್ತರಪ್ರದೇಶ ಸÀರ್ಕಾರವು ತಾನು ಕೋಮು ಗಲಭೆಗಳನ್ನು ತಡೆಗಟ್ಟಲು ಸಾಧ್ಯವಾಗಲಿಲ್ಲ ಎಂಬುದನ್ನು ಒಪ್ಪಿ ತಾನು ಅಸಹಾಯಕ ಎಂದು ಹೇಳಿದೆ. ಅದಾಗ್ಯೂ ಸÀರ್ಕಾರ ಪರಿಹಾರ ಶಿಬಿರದಲ್ಲಿರುವವರ ಪರಿಸ್ಥಿತಿಯ ಬಗ್ಗೆ ಕಣ್ಣುಮುಚ್ಚಿ ಕುಳಿತಿದೆ.

ಔಷಧಿಗಳ ಕೊರತೆ ಮತ್ತು ಚಳಿಯಿಂದ ಶಹಾಪುರ, ಬುಧಾನಾ ಮತ್ತು ಸನ್ಹತೀ ಕ್ಯಾಂಪ್ಗಳಲ್ಲಿ 28 ಮಕ್ಕಳು ಮರಣಹೊಂದಿದ್ದಾರೆ. ಪರಿಹಾರ ಶಿಬಿರಗಳಲ್ಲಿ ಅತ್ಯಾಚಾರಕ್ಕೆ ಒಳಗಾದವರು ಇದ್ದಾರೆ. ಕೋಮುಗಲಭೆಯ ಸಮಯದಲ್ಲಿ ಅತ್ಯಾಚಾರಕ್ಕೆ ಒಳಗಾದವರು ಪ್ರಥಮ ಮಾಹಿತಿ ವರದಿ ದಾಖಲು ಮಾಡಿದ್ದಾರೆ. ಆದರೆ ಇನ್ನೂ ಆರೋಪಿಗಳನ್ನು ಬಂಧಿಸಲಾಗಿಲ್ಲ.

ಇದೇ ಸಂದರ್ಭದಲ್ಲಿ ಬಿಜೆಪಿ ನಾಚಿಕೆ ಇಲ್ಲದೆ ಕೋಮುಗಲಭೆಗಳಿಗೆ ಕಾರಣರಾದ ತನ್ನ ಎಮ್ಎಲ್ಎಗಳನ್ನು ಸನ್ಮಾನಿಸಿತು.
ಅಖಿಲೇಶ್ ಸÀರ್ಕಾರವು ಪÀರಿಹಾರ ಶಿಬಿರದಲ್ಲಿರುವ ಗಲಭೆ ಸಂತ್ರಸ್ತ್ರರನ್ನು ಎತ್ತಿಹಾಕುವ ಪ್ರಯತ್ನ ಮಾಡುತ್ತಿದೆ. ನಿರಾಶ್ರಿತರು ತಮ್ಮ ಸ್ವಂತ ಸ್ಥಳಗಳಿಗೆ ಹೋಗದೇ ಇದ್ದರೆ 5 ಲಕ್ಷಗಳ ಪರಿಹಾರಕ್ಕೆ ಸಹಿ ಹಾಕಲು ಒತ್ತಾಯಿಸುತ್ತಿದೆ. ಆ ಅಫಿಡೆವಿಟ್ನಲ್ಲಿ ಕೋಮು ಗಲಭೆಯಿಂದಾಗಿ ನಾವುಗಳು ಹಳ್ಳಿ ಮತ್ತು ಮನೆಯನ್ನು ಬಿಡಬೇಕಾಯಿತು, ಈಗ ನಾವುಗಳು ಯಾವುದೇ ಪರಿಸ್ಥಿತಿಯಲ್ಲಿ ನಮ್ಮ ಹಳ್ಳಿಗಳಿಗೆ ಹಿಂತಿರುಗುವುದಿಲ್ಲವೆಂದು ಬರೆಸಿಕೊಳ್ಳುತ್ತಿದ್ದಾರೆ.

ಅಷ್ಟೇ ಅಲ್ಲದೆ ಉತ್ತರಪ್ರದೇಶ ಸರ್ಕಾರದ ಅರಣ್ಯ ಇಲಾಖೆಯು ನಿರಾಶ್ರಿತರು ತಮ್ಮ ನೆಲದ ಮೇಲೆ ಶಿಬಿರಗಳನ್ನು ಸ್ಥಾಪಿಸಲಾಗಿದೆ ಎಂದು ಆರೋಪಿಸಿ ಮೊಕದ್ದಮೆ ಹೂಡುತ್ತಿದೆ. ಸಮಾಜವಾದಿ ಪಕ್ಷದ ಹಿರಿಯ ಮಂತ್ರಿ ಶಿವಪಲ್ ಯಾದವ್ ಅವರ ನಾಯಕತ್ವದ ಸಮಿತಿಯು ಕ್ಯಾಂಪ್ಗಳನ್ನು ಖಾಲಿ ಮಾಡಲು ಮದರಸಾಗಳು ಬಿಡುತ್ತಿಲ್ಲ ಎಂದು ಆರೋಪ ಮಾಡುತ್ತಿದೆ. ಕೋಮು ಗಲಭೆಗಳ ಬಗ್ಗೆ ತನಿಖೆ ಮಾಡಲು ನೇಮಿಸಿದ್ದ ವಿಶೇಷ ತನಿಕಾದಳವು ನಾಮಕಾವಸ್ತೆ ಕೆಲಸ ಮಾಡುತ್ತಿದ್ದು, ಕಾಟಾಚಾರಕ್ಕೆ ಕಾಲ ತಳ್ಳುತ್ತಿದೆ.

ಆದ್ದರಿಂದ ನಾವುಗಳು ಈ ಅನ್ಯಾಯವನ್ನು ಸುಮ್ಮನೆ ನೋಡುತ್ತಾ ಕುಳಿತುಕೊಳ್ಳದೆ ದೇಶಾದ್ಯಂತ ಶಿಭಿರಾರ್ಥಿಗಳಿಗೆ ಪÀರಿಹಾರ ಸಾಮಗ್ರಿಗಳನ್ನು ಸಹಾಯ ಮಾಡಬೇಕೆಂದು ಕರೆ ನೀಡಿದ್ದೇವೆ. ಜೊತೆಗೆ ಪರಿಹಾರ, ಪುನರ್ವಸತಿ ಮತ್ತು ನ್ಯಾಯವನ್ನು ಒದಗಿಸಬೇಕೆಂದು ಒತ್ತಾಯಿಸಿದ್ದೇವೆ.

Back-to-previous-article
Top