ಅಖಿಲ ಭಾರತ ಪ್ರಜಾವೇದಿಕೆ ಸಂಘಟನೆಯಿಂದ 2015 ಮಾರ್ಚ್ 14, 15 ಮತ್ತು 16 ರಂದು ಸಂಸದ್ ಮಾರ್ಗದಲ್ಲಿ ಪ್ರಜಾಸಂಸದ್ ನಡೆಸಲಿದೆ. ಸಂಸದ್ನಲ್ಲಿ ಭಾರತಾದ್ಯಂತ 20 ಸಾವಿರ ಜನ ಭಾಗವಹಿಸಲಿದ್ದಾರೆ. ಈ ಸಮಾವೇಶದಲ್ಲಿ ಕೊಪ್ಪಳ ಜಿಲ್ಲೆಯನ್ನು ಪ್ರತಿನಿಧಿಸಿ ಸಾಹಿತಿ ಮತ್ತು ಮಾನವ ಹಕ್ಕುಗಳ ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ ಜೊತೆಗೆ ಕರ್ನಾಟಕದಿಂದ ಸುಮಾರು 20 ಬುದ್ಧಿಜೀವಿಗಳು, ಡಾ|| ಲಕ್ಷ್ಮೀನಾರಾಯಣ ಇವರ ನೇತೃತ್ವದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭೂಸ್ವಾದೀನ ಕಾಯ್ದೆ ತಿದ್ದುಪಡಿ, ಆಹಾರ ಭದ್ರತಾ ಕಾಯ್ದೆಯಲ್ಲಿನ ದೋಷಗಳು, ಉದ್ಯೋಗ ಖಾತ್ರಿ ಯೋಜನೆಯ ಅನುದಾನ ಕಡಿತಗೊಳ್ಳುವಿಕೆ ಸೇರಿದಂತೆ ಅನೇಕ ಜನಪರ ಸಮಸ್ಯೆಗಳ ಬಗ್ಗೆ ಜನಸಂಸದ್ನಲ್ಲಿ ಚರ್ಚಿಸಿ, ಸಂಸತ್ತಿನ ನಿರ್ಣಯಗಳನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುವುದು. ಜನಸಂಸತ್ನಲ್ಲಿ ಸುಮಾರು 20 ಸಾವಿರಕ್ಕಿಂತಲೂ ಹೆಚ್ಚು ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆಂದು ಸಿಪಿಐಎಂಎಲ್ ಪಕ್ಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.